ಕೊಡಿಯಾಲಬೈಲು : ಎಂ. ಜಿ. ಎಂ. ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

0

ಸುಳ್ಯದ ಕೊಡಿಯಾಲಬೈಲ್ ಎಂ. ಜಿ. ಎಂ. ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಡಿ.9 ರಂದು ನಡೆಯಿತು.

ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ಚಂದ್ರ ಕೊಲ್ಚಾರ್ ( ಅಧ್ಯಕ್ಷರು ಗೌಡ ಸೋಶಿಯೋ ಎಜುಕೇಶನ್ ಫೌಂಡೇಶನ್ ‘ರಿ ‘ ಸುಳ್ಯ ), ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಧಾಕೃಷ್ಣ ಮಾಣಿಬೆಟ್ಟು ( ನಿವೃತ್ತ ಧೈಹಿಕ ಶಿಕ್ಷಣ ನಿರ್ದೇಶಕರು ) ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೊಡ್ಡಣ್ಣ ಬರೆಮೇಲು ( ಶಾಲಾ ಸಂಚಾಲಕರು ) ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಗೌಡ ಸೋಶಿಯೋ ಎಜುಕೇಶನ್ ಫೌಂಡೇಶನ್ (ರಿ ) ಇದರ ನಿರ್ದೇಶಕರಾದ ದಿನೇಶ್ ಮಾಡಪ್ಪಾಡಿಯವರು ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು. ಸಹ ಶಿಕ್ಷಕಿಯಾದ ಭಾವನ ಕುರುಂಜಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಮಜಿಕೋಡಿ ವಂದಿಸಿದರು. ಶ್ರೀಮತಿ ಶ್ರುತಿ.ರೈ. ಪಿ. ಕಾರ್ಯಕ್ರಮ ನಿರೂಪಿಸಿದರು.