ದೇವಚಳ್ಳ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ” ಅರಿವು ಕೇಂದ್ರ ” ದಲ್ಲಿ ‘ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಪ್ರಯುಕ್ತ ವಿಶೇಷ ಚೇತನರಿಗೆ ಕಾರ್ಯಕ್ರಮ

0

ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಡಿ.3 ಅನ್ನು ‘ಅಂತರಾಷ್ಟ್ರೀಯ ವಿಶೇಷ ಚೇತನರ ದಿನ ‘ ವನ್ನಾಗಿ ಘೋಷಿಸಿದ್ದು, ಈ ದಿನದ ಅಂಗವಾಗಿ ದೇವಚಳ್ಳ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ” ಅರಿವು ಕೇಂದ್ರ ” ದಲ್ಲಿ ವಿಶೇಷ ಚೇತನರಿಗೆ ಕಾರ್ಯಕ್ರಮವನ್ನು ಡಿ.15ರಂದು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ ಯವರು ನೆರೆವೇರಿಸಿ, ವಿಶೇಷ ಚೇತನರಿಗೆ ಮಾಹಿತಿ ನೀಡಿದರು. ಶಿಕ್ಷಣ ಫೌಂಡೇಶನ್ ನ ಡಿಜಿ ವಿಕಾಸನದ ಜಿಲ್ಲಾ ಸಂಯೋಜ ಲವೀಶ್ ಕುಮಾರ್ ಮತ್ತು ಸುಳ್ಯ ತಾಲೂಕು ಸಂಯೋಜಕರು ದಿನೇಶ್ ರವರು ಭಾಗವಹಿಸಿ ಡಿಜಿ ವಿಕಾಸನದ ಫಲಕವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಕೃಷ್ಣ ಪ್ರಸನ್ನ ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ವಿಶೇಷ ಚೇತನರಿಗೆ ಲಕ್ಕಿ ಗೇಮ್ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಇದರ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿಯವರು ನಿರೂಪಿಸಿದರು.