ಬೆಳ್ಳಾರೆ ಕೆಪಿಎಸ್ ನಲ್ಲಿ ಕೆವಿಜಿ ಸಾಧನೆ- ಸಂಸ್ಮರಣೆ

0

ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸುಳ್ಯ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇದರ ಆಶ್ರಯದಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವ ಪ್ರಯುಕ್ತ ಕೆ ವಿ ಜಿ ಸಾಧನೆ, ಸಂಸ್ಕರಣೆ ಕಾರ್ಯಕ್ರಮ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಡಿ.16 ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಕೆ.ಎನ್ ಜನಾರ್ಧನರವರು ವಹಿಸಿದ್ದರು. ಕೆವಿಜಿ ಸಾಧನೆ ಸಂಸ್ಕರಣೆಯ ಸಂಪನ್ಮೂಲ ವ್ಯಕ್ತಿ ಪುರುಷೋತ್ತಮ ಕಿರ್ಲಾಯ, ಕಾರ್ಯಕ್ರಮದ ನಿರ್ದೇಶಕ ಚಂದ್ರಶೇಖರ ನಂಜೆ, ಕನ್ನಡ ಕಲಾ ಸಾಹಿತ್ಯ ಸಂಘದ ನಿರ್ದೇಶಕರಾದ ಶಮೀಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶರದಿ ಮತ್ತು ತಂಡ ಪ್ರಾರ್ಥಿಸಿದರು.ಸಂಸ್ಥೆಯ ಉಪ ಪ್ರಾಚಾರ್ಯರಾದ ಉಮಾಕುಮಾರಿ ಸ್ವಾಗತಿಸಿದರು. ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಕುರುಂಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ವಿದ್ಯಾರ್ಥಿನಿಯಾದ ಕು ಶರಧಿ ಕುರಂಜಿಯವರ ಜೀವನ ಸಾಧನೆಗಳ ಬಗ್ಗೆ ಕಿರು ಭಾಷಣವನ್ನು ಮಾಡಿದರು. ಕೆ ವಿ ಜಿಯವರ ಜೀವನ ಸಾಧನೆಯ ಬಗ್ಗೆ ಪುರುಷೋತ್ತಮ ಕಿರ್ಲಾಯರವರು ಉಪನ್ಯಾಸವನ್ನು ನೀಡಿದರು.

ಚಂದ್ರಶೇಖರ ನಂಜೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೆ ಎನ್ ಜನಾರ್ಧನ ಪ್ರಾಚಾರ್ಯರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ನಂತರ ಶಾಲಾ ಮಟ್ಟದಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಲಾ ಗ್ರಂಥಾಲಯಕ್ಕೆ ಗಣ್ಯರಿಂದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಸಹಶಿಕ್ಷಕರಾದ ಗಾಯತ್ರಿ ವಂದಿಸಿದರು. ಶಿಕ್ಷಕರಾದ ರಾಮಚಂದ್ರ ಭಟ್ ಎಂ ಕಾರ್ಯಕ್ರಮ ನಿರೂಪಿಸಿದರು.