ಎಣ್ಮೂರು : ನಾಪತ್ತೆಯಾಗಿದ್ದ ಮಹಿಳೆ ಧರ್ಮಸ್ಥಳದಲ್ಲಿ ಪತ್ತೆ

0

ಎಣ್ಮೂರಿನಿಂದ ನಾಪತ್ತೆಯಾಗಿದ್ದ ಮಹಿಳೆಯೋರ್ವರು ಧರ್ಮಸ್ಥಳದಲ್ಲಿ ಪತ್ತೆಯಾದ ಘಟನೆ ಡಿ.15 ರಂದು ವರದಿಯಾಗಿದೆ. ಎಣ್ಮೂರಿನ ಕಟ್ಟ ಕಾಲೊನಿ ನಿವಾಸಿ ರೇವತಿ ಎಂಬವರು ಡಿ.13 ರಂದು ಮನೆಯಿಂದ ನಿಂತಿಕಲ್ಲಿಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದು ಈ ಬಗ್ಗೆ ಅವರ ಪತಿ ರಘುನಾಥ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.