ಡಿ.18 : ಬಂದಡ್ಕ ಸುಬ್ರಹ್ಮಣ್ಯದಲ್ಲಿ ಷಷ್ಠಿ ಮಹೋತ್ಸವ – ಗುಹೆ ಪ್ರವೇಶ

0

ಸುಳ್ಯ ಕಾಸರಗೋಡು ಗಡಿ ಪ್ರದೇಶವಾದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಡಿ.18ರಂದು ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಪ್ರಾತಃ ಕಾಲ ಮಹಾಗಣಪತಿ ಹೋಮ, ಉಷಾಪೂಜೆ, ರಾಶಿಪೂಜೆ ನಡೆಯಲಿದೆ. ಪೂ.8ರಿಂದ 9 ರವರೆಗೆ ತುಲಭಾರ ಸೇವೆ ನಡೆಯಲಿದೆ. ಬಳಿಕ ಗುಹೆ ಪ್ರವೇಶ, ನವಕಾಭಿಷೇಕ ಮಧ್ಯಾಹ್ನ ಮಹಾಪೂಜೆ, ಶ್ರೀ ಭೂತಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನದಾನ ನಡೆಯಲಿದೆ.