ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಅವಭೃತೋತ್ಸವ – ನೌಕಾ ವಿಹಾರ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವದ ಮಹಾ ರಥೋತ್ಸವದ ಬಳಿಕ ಇಂದು ದೇವರ ಅವಭೃತೋತ್ಸವ, ನೌಕಾ ವಿಹಾರ ನಡೆಯಿತು.

ದೇವಾಲಯದಿಂದ ಅದ್ದೂರಿ ಮೆರವಣಿಗೆಯಲ್ಲಿ ಕುಮಾರಧಾರಕ್ಕೆ ತೆರಳಿ ಸ್ನಾನ ಘಟ್ಟದಲ್ಲಿ ಅವಭೃತೋತ್ಸವ, ನೌಕಾ ವಿಹಾರ ನಡೆಯಿತು. ಭಕ್ತಾಧಿಗಳು ನೀರಿಗಿಳಿದು ಸಂಭ್ರಮಿಸಿದರು. ದೇವಾಲಯ ಆನೆ ಯಶಸ್ವಿ ನೀರಾಟವಾಡಿ ಸಂಭ್ರಮಿಸಿತು.


ದೇವಸ್ಥಾನ ಮಂಡಳಿಯವರು, ಅರ್ಚಕ ವೃಂದದವರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.