ಕೆ ಎಫ್ ಡಿ ಸಿಯ ನಿವೃತ್ತ ವಾಹನ ಚಾಲಕ ಸುಕುಮಾರ ಎಸ್. ನಿಧನ

0

ಹೊಸಗದ್ದೆ ಮಿಲಿಟರಿ ಗ್ರೌಂಡ್ ನಿವಾಸಿ ಕೆಎಫ್‌ಡಿಸಿಯ ನಿವೃತ್ತ ವಾಹನ ಚಾಲಕ ಸುಕುಮಾರ ಎಸ್ (65 ವರ್ಷ) ಹೃದಯಾಘಾತದಿಂದ ಮಂಗಳೂರು ಕೆ ಎಂ ಸಿ ಆಸ್ಪತ್ರೆಯಲ್ಲಿ ದ.16 ರಂದು ನಿಧನರಾಗಿದರು.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತರು ಪತ್ನಿ ಶಿವಮಲರ್,ಪುತ್ರ ರಂಜು,ಪುತ್ರಿಯರಾದ ಸುನಿತಾ,ಶುಭ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.