ಆಲೆಟ್ಟಿ ನಾಗಪಟ್ಟಣ ಸೇತುವೆಯ ಬಳಿ ಪಯಸ್ವಿನಿ ನದಿಗೆ ನಗರದ ಕೊಳಚೆ ತ್ಯಾಜ್ಯ ಸುರಿದು ಮಲೀನ- ಪರಿಸರವಿಡಿ ಗಬ್ಬು ವಾಸನೆ, ಸ್ಥಳೀಯರಿಂದ ಆಕ್ರೋಶ

0

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ ಪಯಸ್ವಿನಿ ನದಿಯ ಒಡಲಿಗೆ ನಗರದ ಗುರುಂಪು ಎಂಬಲ್ಲಿ ಚರಂಡಿಯಿಂದ ಹೂಳೆತ್ತಿದ ಕೊಳಚೆಯ ತ್ಯಾಜ್ಯವನ್ನು ಟ್ರಾಕ್ಟರ್ ನಲ್ಲಿ ತುಂಬಿಸಿ ತಂದು ಸುರಿದಿರುವ ಘಟನೆ ಇಂದು ಸಂಜೆ ನಡೆದಿದೆ.

ಗುರುಂಪುವಿನಿಂದ ಕೊಳಚೆಯನ್ನು ಟ್ರಾಕ್ಟರ್ ನಲ್ಲಿ ತುಂಬಿಸಿ ತರುವಾಗ ರಸ್ತೆಯ ಮೇಲೆಲ್ಲಾ ತ್ಯಾಜ್ಯ ಮತ್ತು ಕೊಳಚೆ ನೀರು ಹರಿದುಕೊಂಡು ಬಂದಿದ್ದು ಗಬ್ಬು ವಾಸನೆ ಹರಡಿದೆ.
ನಾಗಪಟ್ಟಣ ಪರಿಸರವಿಡಿ ಗಬ್ಬು ವಾಸನೆ ಬೀರುತ್ತಿದ್ದು ಸ್ಥಳೀಯ ನಿವಾಸಿಗಳು ಆಕ್ರೋಶವ್ಯಕ್ತಪಡಿಸಿದರು.
ಅದೇ ರಸ್ತೆಯಾಗಿ ಆಲೆಟ್ಟಿ ಕಡೆಗೆ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ಟ್ರಾಕ್ಟರ್ ನಲ್ಲಿ ನದಿಗೆ ತ್ಯಾಜ್ಯ ಹಾಕುತ್ತಿರುವ ವೇಳೆ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಸ್ಥಳೀಯ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲ ನಾಗಪಟ್ಟಣ ರವರು ಬಂದು ವಿಚಾರಿಸಿದಾಗ ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್ ರವರು ನಾವು ಟ್ರಾಕ್ಟರ್ ರವರ ಜತೆ ಇಲ್ಲಿ ಹಾಕುವುದಕ್ಕೆ ಹೇಳಲಿಲ್ಲ. ಅವರೇ ತಂದು ಹಾಕಿರುವುದಾಗಿ ಹೇಳಿದ್ದಾರೆ. ತ್ಯಾಜ್ಯ ಒಣಗಿದ ಬಳಿಕ ತೆಗೆಸುತ್ತೇವೆ ಎಂದು ವಿನಂತಿಸಿದರು.
ಕೆಲಸ ನಿರ್ವಹಿಸುವ
ಗುತ್ತಿಗೆದಾರ ಕುಮಾರ್ ಎಂಬವರು ಯಾರು ಕಳುಹಿಸಿದ್ದು ಎಂದು ಕೇಳಿದಾಗ ವೆಂಕಪ್ಪ ವಕೀಲರು ಎಂದು ಹೇಳಿರುವುದು ವೀಡಿಯೋದಲ್ಲಿ
ಕೇಳಿ ಬರುತ್ತಿದೆ.
ಸ್ವಚ್ಛ ಭಾರತದ ಕಲ್ಪನೆಗೆ ವಿರುದ್ಧವಾಗಿ ಸ್ಥಳೀಯಾಡಳಿತದ ಜನಪ್ರತಿನಿಧಿಗಳ ಬೇಜವಬ್ದಾರಿತನದ ವರ್ತನೆಗೆ ಸ್ಥಳೀಯ ನಾಗರಿಕರು ಹಾಗೂ ಪಂಚಾಯತ್ ನವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವುದಲ್ಲದೆ ಕೂಡಲೇ ತ್ಯಾಜ್ಯವನ್ನು ಅಲ್ಲಿಂದ ತೆಗೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.