ಬೆಳ್ಳಾರೆ ಸುನ್ನೀ ಆದರ್ಶ ಸಮ್ಮೇಳನ

0

ಸುನ್ನತ್ ಜಮಾಅತಿನ ನೈಜ ಆದರ್ಶದಡಿಯಲ್ಲಿ ಜೀವಿಸಿ: ವಹಾಬ್ ಸಕಾಫಿ ಮಂಬಾಡ್ ಕರೆ

ಜನಸಾಮಾನ್ಯರ ನಡುವೆ ನೂತನವಾದಗಳನ್ನು ತುರುಕಿಸಿ ಇಸ್ಲಾಮಿನ ಭವ್ಯ ಪರಂಪರೆಗೆ ಮಸಿ ಬಳಿದು ಇಸ್ಲಾಮಿನ ಹೆಸರನ್ನು ಕೆಡಿಸುವ ಶಕ್ತಿಗಳು ನಮ್ಮ ನಡುವೆ ಇದ್ದು ಅವೆಲ್ಲವನ್ನು ಬದಿಗಿಟ್ಟು
ಸುನ್ನತ್ ಜಮಾಅತ್ ನ ನೈಜ ಆದರ್ಶದಡಿಯಲ್ಲಿ ನಾವು ಜೀವಿಸಬೇಕೆಂದು ಖ್ಯಾತ ವಾಗ್ಮಿ ವಹಾಬ್ ಸಕಾಫಿ ಮಂಬಾಡ್ ಕರೆ ನೀಡಿದ್ದಾರೆ.

ಅವರು ಬೆಳ್ಳಾರೆಯಲ್ಲಿ ದ.20 ರಂದು ಕೆಸಿಎಫ್, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ನಡೆದ ಸುನ್ನೀ ಆದರ್ಶ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.ನವೀನವಾದಗಳನ್ನು ಬಿತ್ತರಿಸುತ್ತಾ ಮುಗ್ಧ ಜನರ ಈಮಾನನ್ನು ಕಬಳಿಸುವ ಪ್ರಯತ್ನಗಳು ಇತ್ತೀಚಿಗೆ ಬಹಳ ಹೆಚ್ಚಾಗಿ ನಡೆಯುತ್ತಿದ್ದು ಇದು ಶಾಂತಿಯುತ ಸಮಾಜಕ್ಕೆ ಮಾರಕ ಎಂದು ಹೇಳಿದರು.

ಸಂಜೆ ಬೆಳ್ಳಾರೆ ದರ್ಗಾ ಶರೀಫನಲ್ಲಿ ಸಯ್ಯದ್ ಸಾದಾತ್ ಕರುವೇಲು ತಂಗಳ್ ಝಿಯಾರತ್ ಪ್ರಾರ್ಥನೆ ನಡೆಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಮುಖಂಡ ಹಸೈನಾರ್ ಅಮಾನಿ ಅಜ್ಜಾವರ ನೆರವೇರಿಸಿದರು.
ನಕ್ಕಿಲ ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಝಿಯಾದ್ ಸಖಾಫಿ ಅಲ್ ಮಲ್ಹರಿ ಪ್ರಸ್ತಾವಿಕ ಮಾತನಾಡಿ ಸಮ್ಮೇಳನಕ್ಕೆ ಸರ್ವರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಎಸ್ಎಂಎ ರಾಜ್ಯ ಸಮಿತಿ ಮುಖಂಡರಾದ ಸಾದಾತ್ ತಂಗಳ್ ಕರವೇಲು, ತಾಹಿರ್ ತಂಗಳ್ ಸುಳ್ಯ, ಸ್ವಾಗತ ಸಮಿತಿಯ ಚೇರ್ಮನ್ ಹಮೀದ್ ಅಲ್ಪಾ, ಹನೀಫ್ ಹಾಜಿ ಇಂದ್ರಾಜೆ, ಕಲಿಲ್ ಹಿಮಾಮಿ ತಂಬಿನಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್ಎಂಎ ಬೆಳ್ಳಾರೆ ಝೋನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಬಿಡು,ಕೆಎಂಜೆ ಸಮಿತಿ ಅಧ್ಯಕ್ಷ ಹಸನ್ ಸಕಾಪಿ ಬೆಳ್ಳಾರೆ,ಮಹಮೂದ್ ಹಾಜಿ ಬೆಳ್ಳಾರೆ,ಎಸ್ ವೈ ಎಸ್ ಮುಖಂಡರಾದ ಸತ್ತಾರ್ ಸಕಾಫಿ,ಹನೀಫ್ ಸಕಾಫಿ, ಸಂಸುದ್ದೀನ್ ಝಂ ಝಂ,ಇರ್ಷಾದ್ ಸಅದಿ,ಸುನ್ನೀ ಸಂಘಟನೆಗಳ ಕಾರ್ಯಕರ್ತರು,ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿತ್ತು.