ಬೆಳ್ಳಾರೆ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಬೆಳ್ಳಾರೆ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯು ಡಿ.20 ರಂದು ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿ ಶುಭಹಾರೈಸಿದರು.


ಬೆಂಗಳೂರು ಓಸಾಟ್ ಸಂಸ್ಥೆಯ 1.5 ಕೋಟಿ ರೂ ಅನುದಾನದಲ್ಲಿ 8 ತರಗತಿ ಕೊಠಡಿಗಳು ಮತ್ತು ಒಂದು ಶೌಚಾಲಯ ಘಟಕ ನೂತನವಾಗಿ ನಿರ್ಮಾಣವಾಗಲಿದೆ.


ಈ ಸಂದರ್ಭದಲ್ಲಿ ಓಸಾಟ್ ಸಂಸ್ಥೆಯ ಕಿಶೋರ್ ಕುಮಾರ್ ಹೊಳ್ಳ, ಯಶವಂತ ರಾವ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ರೈ,ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಶ್ರೀಮತಿ ರಾಜೀವಿ ಆರ್.ರೈ,ಎಸ್.ಎನ್. ಮನ್ಮಥ, ಅನಿಲ್ ರೈ ಚಾವಡಿಬಾಗಿಲು, ಪದ್ಮಾನಾಭ ಬೀಡು,ಶಾಂತಾರಾಮ ಕಣಿಲೆಗುಂಡಿ, ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ಪನ್ನೆ, ಮಣಿಕಂಠ, ಕಾಲೇಜಿನ ಪ್ರಾಂಶುಪಾಲ ಜನಾರ್ಧನ ಕೆ.ಎನ್, ಉಪಪ್ರಾಂಶುಪಾಲೆ ಉಮಾಕುಮಾರಿ, ಶಿಕ್ಷಕ ವೃಂದದವರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕೆಪಿಎಸ್ ಹಿ.ಪ್ರಾ.ಶಾಲಾ ಮುಖ್ಯಗುರು ಮಾಯಿಲಪ್ಪರವರು ಸ್ವಾಗತಿಸಿ, ಶಿಕ್ಷಕ ದಿನೇಶ್ ಮಾಚಾರ್ ಕಾರ್ಯಕ್ರಮ ನಿರೂಪಿಸಿ,ಉಮಾಕುಮಾರಿ ವಂದಿಸಿದರು.