ಸುಳ್ಯ‌ ಸಿ.ಎ. ಬ್ಯಾಂಕ್ ಚುನಾವಣೆ

0

ಸಹಕಾರ ಭಾರತಿ 12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಸುಳ್ಯ ಸಿ.ಎ. ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31 ರಂದು‌ ಚುನಾವಣೆ ನಡೆಯಲಿದ್ದು ಸಹಕಾರ ಭಾರತಿಯಿಂದ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸಾಮಾನ್ಯ ಸಾಲಗಾರರ‌ ಕ್ಷೇತ್ರದಿಂದ ಶಿವರಾಮ ಕೇರ್ಪಳ, ಎನ್.ಎ.ರಾಮಚಂದ್ರ, ಪ್ರಬೋದ್ ಶೆಟ್ಟಿ, ವಿಕ್ರಂ ಅಡ್ಪಂಗಾಯ, ವಾಸುದೇವ ಪುತ್ತಿಲ, ಮಹಿಳಾ‌ ಮೀಸಲು ಕ್ಷೇತ್ರದಿಂದ ನವ್ಯಾ ಚಂದ್ರಶೇಖರ, ಹರೀಣಾಕ್ಷಿ ಬೇಲ್ಯ, ಎ ಮೀಸಲು ಸ್ಥಾನ ದಿಂದ ಹೇಮಂತ್ ಕುಮಾರ್ ಕಂದಡ್ಕ, ಬಿ ಮೀಸಲು ಕ್ಷೇತ್ರದಿಂದ ಬಾಲಗೋಪಾಲ ಸೇರ್ಕಜೆ, ಪ.ಪಂಗಡ ಮೀಸಲು ಕ್ಷೇತ್ರದಿಂದ ಚಂದ್ರಶೇಖರ ದೊಡ್ಡೇರಿ, ಪ.ಜಾತಿ ಮೀಸಲು ಕ್ಷೇತ್ರದಿಂದ ಕೇಶವ ಹೊಸಗದ್ದೆ ನಾಮಪತ್ರ ಸಲ್ಲಿಸಿದರು.
ಸಾಲಗಾರರಲ್ಲದ ಕ್ಷೇತ್ರದಿಂದ ನ್ಯಾಯವಾದಿ ಚಂದ್ರಶೇಖರ ನಡುಮನೆ ಸೋಣಂಗೇರಿ ನಾಮಪತ್ರ ಸಲ್ಲಿಸಿದ್ದಾರೆ.

ಸಾಮಾನ್ಯ ಮೀಸಲು ಸ್ಥಾನದ 1 ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳು ಫೈನಲ್ ಆಗಿಲ್ಲವೆಂದು ತಿಳಿದು ಬಂದಿದೆ.

ನಾಮಪತ್ರ ಸಲ್ಲಿಕೆ ಸಂದರ್ಭ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ಬುದ್ದ ಜಿ ನಾಯ್ಕ, ಬಾಲಕೃಷ್ಣ ರೈ ದುಗಲಡ್ಕ, ಶಶಿಕಲಾ ನೀರಬಿದಿರೆ, ಸುಧಾಕರ ಕುರುಂಜಿಭಾಗ್, ಬೂಡು ರಾಧಾಕೃಷ್ಣ ರೈ, ಶೀಲಾವತಿ ಮಾಧವ, ಶೀಲಾ ಕುರುಂಜಿ, ಸುನಿಲ್ ಕೇರ್ಪಳ, ಪ್ರವಿತಾ ಪ್ರಶಾಂತ್, ಹರೀಶ್ ಬೂಡುಪನ್ನೆ, ಜಿನ್ನಪ್ಪ ಪೂಜಾರಿ, ಶ್ರೀಪತಿ ಭಟ್ ಮಜಿಗುಂಡಿ, ಕಿರಣ ಕುರುಂಜಿ ಮೊದಲಾದವರು ಇದ್ದರು.