ಪಂಜ: ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಭೇಟಿ

0

ಪಂಜಕ್ಕೆ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮತ್ತು ಜನ ಶಿಕ್ಷಣ ಟ್ರಸ್ಟಿನ ಕೃಷ್ಣ ಮೂಲ್ಯ ಮತ್ತು ಚೇತನ್ ಕುಮಾರ್ ರವರು ಪಂಜಕ್ಕೆ ಡಿ.21ರಂದು ಭೇಟಿ ನೀಡಿದರು.

ಸ್ವಚ್ಛತಾ ಘಟಕದಲ್ಲಿ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪ್ರೇರಕರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಸ್ವಚ್ಛತಾ ಘಟಕದಲ್ಲಿ ಸಂಜೀವಿನಿ ಸಂಘದವರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು.


ಒಣಕಸ ಹಸಿ ಕಸ ಬೇರ್ಪಡಿಸಿ ಸಂಗ್ರಹ ಮಾಡುವುದರ ಮುಖೇನ ಗ್ರಾಮದ ಅಭಿವೃದ್ಧಿಗೆ ಮಾದರಿಯಾಗಬಹುದು ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಮೊದಲಾದವರು ಉಪಸ್ಥಿತರಿದ್ದರು.