ಜ.01,03 : ಪೇರಾಲು : ಕುತ್ಯಾಡಿ ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ನಾಗತಂಬಿಲ

0

ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿ

ಮಂಡೆಕೋಲು ಗ್ರಾಮದ ಪೇರಾಲು ಕುತ್ಯಾಡಿ ಶ್ರೀ ಧರ್ಮದೈವಸ್ಥಾನ, ಕುತ್ಯಾಡಿ ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ,ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿಯು ಜ.1 ರಿಂದ ಜ.3 ರವರೆಗೆ ನಡೆಯಲಿರುವುದು.
ಜ.1 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಉಗ್ರಾಣ ತುಂಬಿಸುವುದು.


ಜ.02 ರಂದು ಬೆಳಿಗ್ಗೆ ಗಂಟೆ 6.00 ಕ್ಕೆ ಶ್ರೀ ಗಣಪತಿ ಹವನ ಮತ್ತು ನಾಗತಂಬಿಲ
ಪೂರ್ವಾಹ್ನ ಗಂಟೆ 9.00 ರಿಂದ ತರವಾಡು ಮನೆ ಮತ್ತು ದೈವಸ್ಥಾನದ ಶುದ್ಧಿ ಕಲಶ ಗಂಟೆ 10.30 ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆ,ಮಧ್ಯಾಹ್ನ ಗಂಟೆ 12.30 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಅಪರಾಹ್ನ ಗಂಟೆ ,3.00 ರಿಂದ ಕೆಂಚರಾಯ ಪೂಜೆ,ಸಂಜೆ ಗಂಟೆ 6.00 ರಿಂದ ಗುರುಕಾರ್ನೋರು,ಸತ್ಯದೇವತೆ ಮತ್ತು ಪಾಷಾಣಮೂರ್ತಿ,ಗುಳಿಗ ಹಾಗೂ ಅಂಗಾರಬಾಕುಡ ದೈವಗಳ ಕೋಲ ನಡೆಯಲಿದೆ.
ಪ್ರಾತ:ಕಾಲ 4.00 ರಿಂದ ವರ್ಣಾರ ಪಂಜುರ್ಲಿ ದೈವದ ಕೋಲ ಪೂರ್ವಾಹ್ನ ಗಂಟೆ 9.00 ರಿಂದ ಶ್ರೀ ಧರ್ಮದೈವದ ನಡಾವಳಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಎಂದು ಕುಟುಂಬದ ಯಜಮಾನರಾದ ಶಿವಪ್ಪ ಗೌಡ ಮತ್ತು ಆಡಳಿತ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು ತಿಳಿಸಿದ್ದಾರೆ.