ಆಲೆಟ್ಟಿ :ಅಕ್ಕ ಪಕ್ಕದ ಮನೆಯವರ ಜಗಳ

0

ಕತ್ತಿಯಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಜಗಳ ನಡೆದು ಕತ್ತಿಯಿಂದ ಹಲ್ಲೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಸ್ಥಳೀಯ ನಿವಾಸಿಗಳಾದ ರಾಮಣ್ಣ ನಾಯ್ಕ ಮತ್ತು ಕಮಲಾಕ್ಷ ನಾಯ್ಕ ಎಂಬುವವರ ಮಧ್ಯೆ ನಿನ್ನೆ ರಾತ್ರಿ ಮಾತಿಗೆ ಮಾತು ಬೆಳೆದು ಜಗಳ ಆರಂಭಗೊಂಡಿದ್ದು, ಕಮಲಾಕ್ಷ ನಾಯ್ಕರವರಿಗೆ ರಾಮಣ್ಣ ನಾಯ್ಕರು ಕತ್ತಿಯಿಂದ ಕಡಿದಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದು ಘಟನೆಯಿಂದ ರಾಮಣ್ಣ ನಾಯ್ಕ ಮತ್ತು ಅವರ ಪತ್ನಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.