ಜಯನಗರ : ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

0

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೃಷ್ಟಿ ಮೀಡಿಯಾ ಮತ್ತು ಸಂಘಟನಾ ಸಂಸ್ಥೆ ರಿ. ಡಿಜಿಟಲ್ ಮಾರ್ಕೆಟಿಂಗ್ ಸರ್ವಿಸಸ್, ಶಿಕ್ಷಣ ಮತ್ತು ಸಮಾಜದ ಜಾಗೃತಿ ಇದರ ಆಶ್ರಯದಲ್ಲಿ ಟ್ರಷ್ಟಿನ 16ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜಯನಗರ ಸರ್ಕಾರಿ ಶಾಲಾ ಮುಂಭಾಗದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಸುಳ್ಯ ನ ಪಂ.ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ವಹಿಸಿದ್ದರು.

ನಿವೃತ್ತ ಬಿ ಡಿ ಓ ಶ್ರೀಮತಿ ಮೀನಾಕ್ಷಿ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಟ್ರಸ್ಟಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ಟ್ರಸ್ಟ್ ನಡೆಸುತ್ತಿರುವ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಜೆಡಿಎಸ್ ಸುಳ್ಯ ತಾಲೂಕು ಮಹಿಳಾ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ,ರವಿಕೆ ಪ್ರಸಂಗ ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಪಾವನಾ ಸಂತೋಷ್,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮನುಜೇಶ್,ಜಯನಗರ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮುದ್ದಪ್ಪ,ಕೊರಬಡ್ಕ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಕಾರ್ಯದರ್ಶಿ ಸುಂದರ ಕುತ್ಪಾಜೆ, ಸ್ಥಳೀಯರಾದ ಸುರೇಶ್ ಭಟ್,ಶ್ರೀಮತಿ ಸೌಮ್ಯ ರಾಮಚಂದ್ರ ಭಟ್,ನಗರ ಪಂಚಾಯತ್ ಮಾಜಿ ಸದಸ್ಯೆ ಜೂಲಿಯಾನ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.


ಸುದ್ದಿ ಪತ್ರಿಕೆ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಮಹಾಲಕ್ಷ್ಮಿ ಕೊರಂಬಡ್ಕ ವಂದಿಸಿದರು.

ಈ ಸಂಧರ್ಭದಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.