ಶಾಸಕಿ ಭಾಗೀರಥಿ ಮುರುಳ್ಯರಿಗೆ ಕ್ರಿಸ್ಮಸ್ ಸೌಹಾರ್ದ ಕೂಟಕ್ಕೆ ಆಹ್ವಾನ : ಪರಸ್ಪರ ಶುಭಾಶಯ ವಿನಿಮಯ

0

ಡಿಸೆಂಬರ್ 30ರಂದು ಮಂಗಳೂರಿನ ಕೋಡಿಯಾಲ ಬೈಲು ಬಿಷಪ್ ಹೌಸ್ ನಲ್ಲಿ ಕಥೋಲಿಕ್ ಸಭಾ ಮಂಗಳೂರು ಇವರು ನಡೆಸುವ ಕ್ರಿಸ್ಮಸ್ ಸೌಹಾರ್ದ ಕೂಟಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗಿರಥಿ ಮುರುಳ್ಯ ಇವರನ್ನು ಸೈಂಟ್ ಬ್ರಿಜಿಡ್ಸ್ ಚರ್ಚಿನ ಕಥೋಲಿಕಸಭಾ ಸುಳ್ಯ ಘಟಕವು ಡಿ 25ರಂದು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿ,ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೇಕ್ ನೀಡಿ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.

ನಿಯೋಗದಲ್ಲಿ ಸೈಂಟ್ ಬ್ರಿಜಿಡ್ಸ್ ಚರ್ಚ್ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ಕಥೋಲಿಕ ಸಭಾ ಸುಳ್ಯ ಘಟಕದ ಅಧ್ಯಕ್ಷ ಗಾಡ್ ಫ್ರಿ ಮೊಂತೇರೋ,ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಬಿಜೆಪಿ ಪಕ್ಷದ ಮುಖಂಡರುಗಳಾದ ಮಹೇಶ್ ರೈ ಮೇನಾಲ,ರಾಧಾಕೃಷ್ಣ ರೈ ಬೂಡು ಹಾಗೂ ಶಾಸಕರ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.