ಡಾ.ಕುರುಂಜಿ 95 ನೇ‌ ಜಯಂತ್ಯುತ್ಸವ

0

ಪ್ರೆಸ್ ಕ್ಲಬ್ ವತಿಯಿಂದ ಕುರುಂಜಿಯವರ ಪುತ್ಥಳಿಗೆ ಹಾರಾರ್ಪಣೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾದ್ಯಕ್ಷರಾದ ದಿ. ಕುರುಂಜಿ ವೆಂಕಟ್ರಮಣ ಗೌಡರ 95 ನೇ‌ ಜಯಂತ್ಯುತ್ಸವದ ಪ್ರಯುಕ್ತ ಸುಳ್ಯ ಪ್ರೆಸ್‌ಕ್ಲಬ್ ಮತ್ತು ಗಾಂಧಿ ಚಿಂತನ ವೇದಿಕೆಯ ವತಿಯಿಂದ ಸುಳ್ಯ ಖಾಸಗಿ‌ ಬಸ್‌ ನಿಲ್ದಾಣದಲ್ಲಿರುವ ಡಾ.ಕುರುಂಜಿ ಪುತ್ಥಳಿ ಗೆ‌ ಹಾರಾರ್ಪಣೆ ಮಾಡಲಾಯಿತು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ‌ಬಂಟ್ವಾಳ್ ಹಾರಾರ್ಪಣೆ ಗೈದು, ಡಾ.ಕುರುಂಜಿ ಯವರ ಆದರ್ಶದ ಕುರಿತು ಮಾತನಾಡಿದರು. ಕೆ.ವಿ.ಜಿ. ಸುಳ್ಯ‌ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ‌ಈಶ್ವರ ವಾರಣಾಸಿಯವರು ಹಾರಾರ್ಪಣೆ ಗೈದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಉಪಾಧ್ಯಕ್ಷ ಜೆ.ಕೆ.ರೈ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಡಾ.ಎನ್.ಎ.ಜ್ಞಾನೇಶ್, ಆನಂದ ಖಂಡಿಗ, ಡಾ.ಸುಂದರ ಕೇನಾಜೆ, ಶೈಲೇಶ್‌ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ದಿನೇಶ್ ಅಂಬೆಕಲ್ಲು, ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಗಂಗಾಧರ್ ಮಟ್ಟಿ, ದುರ್ಗಾಕುಮಾರ್ ನಾಯರ್ ಕೆರೆ, ಯಶ್ವಿತ್ ಕಾಳಂಮನೆ, ಪೂಜಾಶ್ರೀ ವಿತೇಶ್, ಶಿವಪ್ರಸಾದ್ ಕೇರ್ಪಳ ಮೊದಲಾದವರಿದ್ದರು.

ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ದಯಾನಂದ ಕಲ್ನಾರ್ ವಂದಿಸಿದರು.