ಪಡ್ಪಿನಂಗಡಿ ಶಾಲಾ ಕ್ರೀಡೋತ್ಸವ

0

ಶಾಲಾ ಶಿಕ್ಷಣ ಇಲಾಖೆ ದ. ಕ.ಜಿ.ಪ ಹಿ.ಪ್ರಾ. ಶಾಲೆ. ಪಡ್ಪಿನಂಗಡಿ. ವಿದ್ಯಾರ್ಥಿಗಳ, ಪೋಷಕರ, ಊರವರ, ಸಹಭಾಗಿತ್ವದಲ್ಲಿ ಪಡ್ಪಿನಂಗಡಿ ಶಾಲಾ ಕ್ರೀಡೋತ್ಸವ ಡಿ. 21 ರಂದು ನಡೆಯಿತು
ಕಾರ್ಯಕ್ರಮವನ್ನು ಗ್ರಾ. ಪ. ಸದಸ್ಯ ಲೋಕೇಶ್ ಆಕ್ರಿಕಟ್ಟೆ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅಥಿತಿಗಳಾಗಿ ನಿವೃತ್ತ ಶಿಕ್ಷಕ ವಾಸುದೇವ ನಡ್ಕ ಮತ್ತು ಶ್ರೀಮತಿ ರುಕ್ಮಿಣಿ ಬಿ. ಸಿ ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ
ಸಿ ಅಧ್ಯಕ್ಷ ದಾವುದ್ ಮುಚ್ಚಿಲ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ತಾ.ಪಂ.ಮಾಜಿ ಸದಸ್ಯ ಅಬ್ದುಲ್ ಗಫೂರ್ , ಶಾಲಾ ಸಂಪನ್ಮೂಲ ವ್ಯಕ್ತಿ ಜಯಂತ.ಕೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ಶ್ರೀಮತಿ, ಸರೋಜಿನಿ.ಕೆ. ಹಾಗೂ ಸುರೇಶ್ ನಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಗೆ ಧ್ವನಿವರ್ಧಕವನ್ನು ನೀಡಿದ ದಾನಿಗಳಾದ ನಾಗೇಶ ತೆಂಕಪ್ಪಾಡಿ ಮತ್ತು ಶಾಲೆಗೆ ಬಾಲವನ ನಿರ್ಮಿಸಿ ಕೊಟ್ಟ ಬಾಲಕೃಷ್ಣ ಪುತ್ಯ ರವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ಸ್ಪರ್ಧೆಗಳ ನಿರ್ಣಾಯಕರಾಗಿ ಕ್ಲಾಸಿಕಲ್ ಸ್ಪೋರ್ಟ್ಸ್ ಕ್ಲಬ್ ನ ಅಶ್ರಫ್ ಮತ್ತು ಸದಸ್ಯರುಗಳು ನಿರ್ವಹಿಸಿದರು.


ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ. ಟಿ. ಸ್ವಾಗತಿಸಿದರು. ಬಹುಮಾನ ವಿತರಣೆ ಪಟ್ಟಿಯನ್ನು ಸಹ ಶಿಕ್ಷಕಿ ಶ್ರೀಮತಿ ಯೋಗೀಶ್ವರಿ. ಪಿ. ನಿರ್ವಹಿಸಿದರು. ಸಹ ಶಿಕ್ಷಕಿ ಶ್ರೀಮತಿ ಸುಗಂಧಿ ಯು. ವಂದಿಸಿದರು . ಸಹ ಶಿಕ್ಷಕಿ ಕುಮಾರಿ ಲಾವಣ್ಯ ನಿರೂಪಿಸಿದರು.