ಬೆಳ್ಳಾರೆ ಎಸ್.ಕೆ.ಎಸ್.ಎಸ್.ಎಫ್ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಜಮಾಲ್ ಮಣಿಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಅಝೀಜ್ ಮಾಸ್ತಿಕಟ್ಟೆ

ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಶಾಖೆ ಇದರ 2024-26 ವರ್ಷದ ನೂತನ ಸಮಿತಿಯು ಡಿ.22ರಂದು ನಡೆದ ಶಾಖಾ ಮಹಾ ಸಭೆಯಲ್ಲಿ ‌ಹಳೆಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಹೊಸ ಕಮಿಟಿಯನ್ನು SKSSF ಸುಳ್ಯ ವಲಯ ಮಟ್ಟದ ಚುನಾವಣಾ ಅಧಿಕಾರಿಯಾದ ತಾಜುದ್ದೀನ್ ಪಾಲ್ತಾಡ್ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಅಬ್ದುಲ್ ಖಾದರ್ ಫೈಝಿ ಉಸ್ತಾದ್‌ರವರ ಮುಂದಾಳತ್ವದಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಜಮಾಲ್ ಮಣಿಮಜಲ್, ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಮಾಸ್ತಿಕಟ್ಟೆ ಹಾಗೂ ಖಜಾಂಚಿ ಸ್ಥಾನಕ್ಕೆ‌ ಹಮೀದ್ ಬೀಡು ಇವರನ್ನು ಆಯ್ಕೆ ಮಾಡಲಾಯಿತು.
ವರ್ಕಿಂಗ್ ಕಾರ್ಯದರ್ಶಿಯಾಗಿ ಸತ್ತಾರ್ ಪೆರುವಾಜೆ, ಜೊತೆ ಕಾರ್ಯದರ್ಶಿಯಾಗಿ ಹಾಷಿಂ ಮತ್ತು ಸಾಹಿಲ್ ಅವರನ್ನು ನೇಮಿಸಲಾಯಿತು.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ಉಮ್ಮರ್ ಪೆರುವಾಜೆ ಹಾಗೂ ಫಾಝಿಲ್ ಇವರನ್ನು ಆಯ್ಕೆಗೊಳಿಸಲಾಯಿತು.
ನೂತನ ಸಮಿತಿಯ ಸದಸ್ಯರಾಗಿ ಅನಸ್, ಕೈಫ್, ಅಫ್ರೀದ್, ರಾಶಿದ್, ಅಝರುದ್ದೀನ್ ಬೆಳ್ಳಾರೆ, ಬಶೀರ್ ತಡಗಜೆ ಮತ್ತು ರಫೀಕ್ ಕಲ್ಲೋಣಿ ಆಯ್ಕೆಗೊಂಡರು.
ಕ್ಲಸ್ಟರ್ ಕೌಂಸಿಲರ್‌ಗಳಾಗಿ ಜಮಾಲುದ್ದೀನ್ ಕೆ.ಎಸ್, ಸಿದ್ದೀಕ್ ಮಾಲೆಂಗ್ರಿ, ಬಶೀರ್ ಯು.ಪಿ, ಅಝರುದ್ದೀನ್ ಬೆಳ್ಳಾರೆ, ತಾಜುದ್ದೀನ್ ಪಾಲ್ತಾಡ್, ಸಿಫುವಾನ್, ಶೈಜಲ್, ಶಿಹಾಬ್, ಶಿಬಿಲ್, ರಫೀಕ್ ಕಲ್ಲೋಣಿ ಮತ್ತು ಇಬ್ರಾಹಿಂ ಬಾತಿಶಾ ಇವರು ಆಯ್ಕೆಗೊಂಡರು.
ಶಾಖಾ ಎಜುಕೇಟರ್ ಆಗಿ ಶಾಫಿ ಕಲ್ಲೇರಿ ಅವರನ್ನು ನೇಮಿಸಲಾಯಿತು.