ರೋಟರಿ ಸುಳ್ಯ ಸಿಟಿ ವತಿಯಿಂದ ರೈತ ದಿನಾಚರಣೆ ಹಾಗೂ ಸನ್ಮಾನ

0

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ರೈತ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಡಿ. 28 ರಂದು ರೋಟರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ| ಗಿರೀಶ್ ನಾರ್ಕೋಡುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ರೈತ ಪ್ರಶಸ್ತಿ ವಿಜೇತ ಐವರ್ನಾಡಿನ ನವೀನ ಚಾತುಬಾಯಿಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಅವರು ತಮ್ಮ ಕೃಷಿ ಕ್ಷೇತ್ರದ ಸಾಧನೆಯನ್ನು ಹಂಚಿಕೊಂಡರು, ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸ್ಥಾಪಕಾದ್ಯಕ್ಷ ರೊ| ಪ್ರಮೋದ್. ಕೆ, ನಿಯೋಜಿತ ಅಧ್ಯಕ್ಷ ರೊ| ಶಿವಪ್ರಶಾದ್ ಕೆ ವಿ, ಕಾರ್ಯದರ್ಶಿ ರೊ| ಚೇತನ್ ಪಿ ಎನ್ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.