ಸಜ್ಜನ ವರ್ಷದ ಕಾರ್ಯಕ್ರಮ ಮತ್ತು ಅದೃಷ್ಟ ದಂಪತಿಗಳ ಆಯ್ಕೆ

0

ಜನತಾ ಕುಟುಂಬ ಮಿಲನ ಹಾಗೂ ಗೂನಡ್ಕದ ಲಿಖಿತ ಅಬೀರ ದಂಪತಿ ಪಾಲಿಗೆ ಒಲಿದ ಪ್ರಥಮ ಬಹುಮಾನ

ಸುಳ್ಯ ಗೂನಡ್ಕ ಸಜ್ಜನ ಸಭಾಂಗಣದಲ್ಲಿ 2023 ನೇ ವರ್ಷದ ಸಾಲಿನಲ್ಲಿ ನಡೆದಿರುವ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಅದೃಷ್ಟ ದಂಪತಿಗಳು ಮತ್ತು ಅದೃಷ್ಟ ಕಾರ್ಯಕ್ರಮಗಳ ಆಯ್ಕೆ ಪ್ರಕ್ರಿಯೆ ಬೆಂಗಳೂರು ಸಜ್ಜನ ಪ್ರತಿಷ್ಠಾನ ಕಛೇರಿಯಲ್ಲಿ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ರವರ ಸಮ್ಮುಖದಲ್ಲಿ ನಡೆಯಿತು.

ಸಜ್ಜನ ಪ್ರತಿಷ್ಠಾನದ ನಿರ್ದೇಶಕರ ಪಾರ್ಮೇಡ್ ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಆರೀಸ್ ಪೇರಡ್ಕ ಅದೃಷ್ಟ ಚೀಟಿ ಎತ್ತುವ ಮೂಲಕ ಅದೃಷ್ಟ ಶಾಲಿಗಳನ್ನು ಆಯ್ಕೆಮಾಡಿದರು. ಸಜ್ಜನ ಅದೃಷ್ಟ ದಂಪತಿಗಳ ಆಯ್ಕೆಯಲ್ಲಿ ಗೂನಡ್ಕ ಲಿಖಿತ ಅಬಿರ ಮತ್ತು ಮುಖೇಶ್ ದಂಪತಿಗಳು ಪ್ರಥಮ ಅದೃಷ್ಟವಂತರಾಗಿದ್ದಾರೆ.

ಸಪ್ರಿನಾ ಮತ್ತು ನೌಪಲ್ ದಂಪತಿಗಳು ದ್ವೀತಿಯ ಅದೃಷ್ಟ ವಂತರಾಗಿದ್ದಾರೆ. ಅಬ್ದುಲ್‌ ನಸ್ಪಾನ್ ಮತ್ತು ಇಶ್ರತ್ ಬಾನು ದಂಪತಿಗಳು ತೃತೀಯ ಅದೃಷ್ಟ ವಂತರಾಗಿದ್ದಾರೆ. ಅದೃಷ್ಟ ಕಾರ್ಯಕ್ರಮದಡಿಯಲ್ಲಿ ಜನತಾ ಕುಟುಂಬ ಮಿಲನ ಕಾರ್ಯಕ್ರಮ ಆಯ್ಕೆಯಾಗಿದೆ ಎಂದು ಸಜ್ಜನ ಪ್ರತಿಷ್ಠಾನ ರಹೀಮ್ ಬೀಜದಕಟ್ಟೆ ತಿಳಿಸಿದ್ದಾರೆ