ಜ. 1: ಪಂಜಿಗಾರಿನಲ್ಲಿ ಗ್ರಾಮಜನ್ಯ ಶಾಖಾ ಕಛೇರಿ ಉದ್ಘಾಟನೆ

0

ಭಾರತ ಸರಕಾರದ ಸಣ್ಣ ರೈತರ ಕೃಷಿ – ವ್ಯಾಪಾರ ಒಕ್ಕೂಟ ಮತ್ತು ರಾಷ್ಟ್ರೀಯ ಜೇನು ಜೇನು ಮಂಡಳಿಯಿಂದ ಜೇನು ಕೃಷಿಯ ಅಧಿಕೃತ FPO ಎಂದು ಮಾನ್ಯತೆ ಪಡೆದ ದಕ್ಷಿಣ ಭಾರತದ ಪ್ರಪ್ರಥಮ ಸಂಸ್ಥೆ ಗ್ರಾಮಜನ್ಯ ಶಾಖಾ ಕಛೇರಿ ಜ. 1ರಂದು ಪಂಜಿಗಾರಿನ PKJ ಸಂಕೀರ್ಣದಲ್ಲಿ ಪೂ. 11.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಪ್ಪೇರ್ಯ ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟಿನ ಅಧ್ಯಕ್ಷ ದಾಮೋದರ ಕಲ್ಕಳ ದೀಪ ಪ್ರಜ್ಬಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಸಭಾಧ್ಯಕ್ಷತೆ ವಹಿಸಲಿದ್ದು, ಗ್ರಾಮಜನ್ಯದ ಹೊಸ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಗ್ರಾಮಜನ್ಯದ ನಿರ್ದೇಶಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.