ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ಬೆಳ್ಳಿಹಬ್ಬದ ಆಮಂತ್ರಣ ಬಿಡುಗಡೆ

0

ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘದ ಬೆಳ್ಳಿಹಬ್ಬವು ಜ.26 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಹಳೆಗೇಟು ಕಾರ್ಮಿಕ ಸಮುದಾಯ ತಿಲಕ ಭವನದಲ್ಲಿ ಜ.2 ರಂದು ನಡೆಯಿತು.


ಈ‌ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ಉಪಾಧ್ಯಕ್ಷ ರವಿ ಜಾಲ್ಸೂರು, ಸ್ಥಾಪಕಾಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್, ಕಾನೂನು ಸಲಹೆಗಾರರಾದ ಪಿ.ಭಾಸ್ಕರ ರಾವ್, ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಬಿ., ಜಾಲ್ಸೂರು ಘಟಕದ ಅಧ್ಯಕ್ಷ ಗೋಪಾಲ ಅಡ್ಕಾರ್, ಉಪಾಧ್ಯಕ್ಷ ಕರುಣಾಕರ ಕಾಡುಸೊರಂಜ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.