ಪಂಜ:ಸಂಪೂರ್ಣ ಸುರಕ್ಷಾ ಚೆಕ್ ವಿ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪಂಜ ವಲಯದ ಐವತೋಕ್ಲು ಒಕ್ಕೂಟದ ಅನ್ನದಾತ ಸಂಘದ ಸದಸ್ಯ ಧರ್ಮಪಾಲ ಕಂಡೂರು ರವರಿಗೆ ಅನಾರೋಗ್ಯ ಆಸ್ಪತ್ರೆ ವೆಚ್ಚ ರೂ.14000ಮೊತ್ತ ಸಂಪೂರ್ಣ ಸುರಕ್ಷಾ ದಲ್ಲಿ ಮಂಜೂರಾದ ಚೆಕ್ ನ್ನು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪಂಜ ವಲಯದ ಮೇಲ್ವಿಚಾರಕಿ ಶ್ರೀಮತಿ ಕಲಾವತಿ, ಐವತ್ತೊಕ್ಲು ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ಹಾಗೂ ಅನ್ನದಾತ ಸಂಘದ ಸದಸ್ಯರು ಉಪಸ್ಥಿತರಿದ್ದರು.