ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವತಿಯಿಂದ ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಯೋಧರಿಗೆ ಅದ್ದೂರಿ ಸ್ವಾಗತ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರ ವತಿಯಿಂದ ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಯೋಧ ಜಯಕರ ಮಡ್ತಿಲ ಇವರನ್ನು ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಅದ್ದೂರಿಯಾಗಿ ಹಾರತೊಡಿಸಿ ಸ್ಮರಣಿಕೆ, ಫಲ ಪುಷ್ಪ ನೀಡಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಸಿಬ್ಬಂದಿ ವರ್ಗ ಸೊಸೈಟಿ ಅಧ್ಯಕ್ಷರು ನಿರ್ದೇಶಕರು ಮತ್ತು ನೂರಾರು ಸಂಖ್ಯೆಯಲ್ಲಿ ಊರವರು ಮುಖಂಡರು ಸೇರಿದ್ದರು.