ಬಳ್ಪ: ವಿದ್ಯುತ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ

0

ವಿದ್ಯುತ್ ಶಾಕ್ ಗೆ ಲೈನ್‌ಮ್ಯಾನ್ ಬಲಿಯಾದ ಘಟನೆ ಜ.೫ ರಂದು ಬಳ್ಪದಿಂದ ವರದಿಯಾಗಿದೆ.

ಬಳ್ಪ ಗ್ರಾಮದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯ ಹೊಳೆ ನರಸೀಪುರ ಸಿಗರನಹಳ್ಳಿ ರಘು ಎಸ್. ಆರ್. (೩೨ವ)ಮೃತ ಪಟ್ಟವರು.
ಅವರು ವಿದ್ಯುತ್ ದುರಸ್ಥಿ ನಡೆಸಲು ತೆರಳಿದ ವೇಳೆ ಘಟನೆ ಸಂಭವಿಸಿದೆ. ವಿದ್ಯುತ್ ಪರಿವರ್ತಕ ಬಳಿ ಮೃತ ದೇಹವಿದ್ದು, ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಆಗಮಿಸಿದ್ದಾರೆ.


ಮೃತರು ತಂದೆ, ತಾಯಿ,ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಳೆದ ಸುಮಾರು 1.5 ವರುಷಗಳಿಂದ ಪಂಜ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.