ಸುಳ್ಯದಲ್ಲಿ ಬ್ಯಾನರ್ ಹರಿದ ಪ್ರಕರಣ : ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡನೆ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಟೋ – ಚಾಲಕ ಮ್ಹಾಲಕರುಗಳು ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವ, ಅಯೋಧ್ಯೆ ರಾಮ ಮಂದಿರ, ಮತ್ತು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಶುಭ ಕೋರುವ ಬ್ಯಾನರನ್ನು ಕೆಲವು ದಿನಗಳ ಹಿಂದೆ ಅಳವಡಿಸಿದ್ದರು. ಇಂದು ಮುಂಜಾನೆ ಈ ಬ್ಯಾನರನ್ನು ಹರಿದು ಯಾರೋ ಕಿಡಿಗೇಡಿಗಳು ವಿಕೃತಿ ಮೆರಿದಿರುವುದನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಮತ್ತು ಇಂತಹ ನೀಚ, ಹೀನ ಕೃತ್ಯವನ್ನು ಎಸಗುವವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.