ಸುಳ್ಯದಲ್ಲಿ ಯುವ ಕ್ಷಮತಾ ತರಬೇತಿ ಕಾರ್ಯಗಾರ

0

ಯುವಜನ ಸಂಯುಕ್ತ ಮಂಡಳಿಯಲ್ಲಿ ಸುಳ್ಯ ಇದರ ಆಶ್ರಯದಲ್ಲಿ ಮಾಹಿತಿ ಶಿಕ್ಷಣ ಸಂವಹನ ಯುವಕ ಯುವತಿಯರಿಗೆ ತರಬೇತಿ ಕಾರ್ಯಕ್ರಮ ಇಂದು ಯುವಜನ ಸಂಯುಕ್ತ ಮಂಡಳಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿಯ ಪೂರ್ವ ಅಧ್ಯಕ್ಷರಾದ ಶಿವಪ್ರಕಾಶ ಕಡಪಳ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಸಭಾಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಎ.ಎಂ.ಜಯನಗರ ವಹಿಸಿದ್ದರು. ತರಬೇತಿಯನ್ನು ಜೆ ಸಿ ಐ ಪ್ರದೀಪ್ ಬಾಕಿಲ ನೀಡಿದರು.

ಗೌರವ ಉಪಸ್ಥಿತಿಯಲ್ಲಿ ಯುವಜನ ಸೇವಾ ಸಂಸ್ಥೆ ಸುಳ್ಯ ಇದರ ಅಧ್ಯಕ್ಷರಾದ ದೀಪಕ ಕುತ್ತಮೊಟ್ಟೆ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಸಂಯುಕ್ತ ಮಂಡಳಿ ಪ್ರಧಾನ ಕಾರ್ಯದರ್ಶಿ, ಗುರುರಾಜ ಅಜ್ಜಾವರ, ನಿರ್ದೇಶಕರಾದ ಮುರಳಿ ನಳಿಯಾರು ಉಪಸಿದ್ಧರಿದ್ದರು. ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತಮಂಡಳಿಯ ಜೊತೆ ಕಾರ್ಯದರ್ಶಿ ದಿನೇಶ್ ಹಾಲೇಮಜಲು ವಂದಿಸಿದರು. ಪ್ರತಾಪ ಯುವಕ ಮಂಡಲ ಅಜ್ಜಾವರ ನವಚೇತನ ಯುವಕ ಮಂಡಲ ಬೋಳುಬೈಲು ವೀರ ವನಿತೆ ಕ್ರೀಡಾ ಮತ್ತು ಕಲಾಸಂಘ ಮಂಡೆಕೋಲು ಚೈತ್ರ ಯುವತಿ ಮಂಡಲ ಅಜ್ಜಾವರ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ತರಬೇತಿಯಲ್ಲಿ ತಾಲೂಕಿನ ಯುವಕ ಮತ್ತು ಯುವತಿ ಮಂಡಲದ ಸದಸ್ಯರುಗಳು ಭಾಗವಹಿಸಿದರು. ಯುವ ಜನ ಸಂಯುಕ್ತ ಮಂಡಳಿಯ ಎಲ್ಲಾ ನಿರ್ದೇಶಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಮಂಡಳಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.

ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ಕ್ಯಾನ್ಸರ್ ರೋಗಕ್ಕೆ ಕಾರಣಗಳು ಮುಂಜಾಗ್ರತಾ ಕ್ರಮಗಳು ಬಗ್ಗೆ ಮಾಹಿತಿಯನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಯಂ.ಡಿ. ಡಾ. ಕಮಲಾಕ್ಷ ಕೆ. ಶೇಣ್ಣೈ ಮಾಹಿತಿ ನೀಡಿದರು. ಅವರನ್ನು ಯುವಜನ ಸಂಯುಕ್ತ ಮಂಡಳಿಯ ಪರವಾಗಿ ಗೌರವಿಸಲಾಯಿತು.

(ಚಿತ್ರ ವರದಿ : ಡಿಹೆಚ್)