ಪೆರಾಜೆ : ಕೊಳಂಗಾಯ ಕುಟುಂಬದಲ್ಲಿ ಶ್ರೀ ಉಳ್ಳಾಕುಲು ಗುಡಿ, ಪೊಟ್ಟನ್ ದೈವದ ಗುಡಿಯ ನವೀಕರಣ

0

ಪೆರಾಜೆಯ ಕೊಳಂಗಾಯ ಕುಟುಂಬದಲ್ಲಿ ಶ್ರೀ ಉಳ್ಳಾಕುಲು ಗುಡಿ, ಪೊಟ್ಟನ್ ದೈವದ ಗುಡಿಯ ನವೀಕರಣ ಹಾಗೂ ಮಲೆ ಚಾವುಂಡಿ ದೇವಿಯ ಆರಾಧನೆಗೆ ಕಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮ
ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ನಡೆಯಿತು.

ಪೊಟ್ಟನ್ ದೈವದ ಪ್ರತಿಷ್ಠಾಪನೆ ಆಲೆಟ್ಟಿ ರಾಮ ಮಣಿಯಾಣಿ, ಉಳ್ಳಾಕುಲು ಚೆoಬು ಗ್ರಾಮದ ಕಿನ್ನಿಮಾನಿ ಪೂಮಾನಿ ದೇವಸ್ಥಾನದ ಅರ್ಚಕರು, ಮಲೆ ಚಾವುಂಡಿ ಪ್ರತಿಷ್ಠಾಪನೆ ನಂದ ಕುಡಿಯ ಅವರು ನೆರವೇರಿಸಿದ್ದು ಸಮಸ್ತ ಕುಟುಂಬಸ್ಥರು ಭಾಗವಹಿಸಿದ್ದರು.

ಇದೇ ಕುಟುಂಬದಲ್ಲಿ ಜನವರಿ 12 ರಂದು ಹರಿಸೇವೆ, ಕೆಂಚಿರಾಯನ ಪೂಜೆ,13 ರಂದು ವಿಷ್ಣ್ಣು ಮೂರ್ತಿ, ಧರ್ಮದೈವ ಹಾಗೂ ಇತರ ದೈವಗಳ ನಡಾವಳಿ ನಡೆಯಲಿದೆ.