ಯೋಗಾಸನದಲ್ಲಿ ಸುಬಿಕ್ಷ ಬಾಲಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಪತಂಜಲಿ ಯೋಗ ಕೇಂದ್ರ ಬೆಂಗಳೂರು, ಡಿ.ವಿ.ಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿ ವೇದಿಕೆ ಬೆಂಗಳೂರು ಇವರು ಶ್ರೀ ಹೊನ್ನಗಂಗಾ ಕಲ್ಯಾಣ ಭವನ ಲಗ್ಗೆರೆ, ಬೆಂಗಳೂರಿನಲ್ಲಿ ಆಯೋಜಿಸಿದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024* 08 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸುಬಿಕ್ಷ ಬಾಲಾಡಿ ಪ್ರಥಮ ಸ್ಥಾನಗಳಿಸಿ ಏಪ್ರಿಲ್ ನಲ್ಲಿ ಮಲೇಷ್ಯಾದಲ್ಲಿ *ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿರುವ ಇವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ *01ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಯೇನೆಕಲ್ಲಿನ ಸುರೇಶ ಬಾಲಾಡಿ ಮತ್ತು ಶ್ರೀಮತಿ ಸುಲಕ್ಷ ಬಾಲಾಡಿ ರವರ ಪುತ್ರಿ