ಮುರ್ಕೆತ್ತಿ : ಸ್ಟಾರ್ ಸಂಜೀವಿನಿ ವತಿಯಿಂದ ಸಿಹಿ ತಿಂಡಿ ತಯಾರಿಕಾ ಘಟಕ ಉದ್ಘಾಟನೆ

0

ಪೆರುವಾಜೆ ಗ್ರಾಮದ ಮುರ್ಕೆತ್ತಿಯಲ್ಲಿ ಗ್ರಾಮ ಸ್ನೇಹಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಪೆರುವಾಜೆ ಇದರ ಸ್ಟಾರ್ ಸಂಜೀವಿನಿ ಸಂಘದ ಸದಸ್ಯೆಯರ ವತಿಯಿಂದ ಸಿಹಿ ತಿಂಡಿ ತಯಾರಿಕಾ ಘಟಕವು ಜ.09 ರಂದು ಶುಭಾರಂಭಗೊಂಡಿತು.


ದ.ಕ.ಜಿ.ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ ಕೆ.ಇ ಮತ್ತು
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ರವರು ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ,ಸದಸ್ಯ ಸಚಿನ್ ರಾಜ್ ಶೆಟ್ಟಿ,ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ,ಕಟ್ಟಡ ಮಾಲಕ ಅಬೂಬಕ್ಕರ್,ಒಕ್ಕೂಟದ ಉಪಾಧ್ಯಕ್ಣೆ ಪೂರ್ಣಿಮಾ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ಎಂಬಿಕೆ ದೇವಕಿ ಸ್ವಾಗತಿಸಿ,ಪೂರ್ಣಿಮಾ ವಂದಿಸಿದರು.


ಎಲ್.ಸಿ.ಆರ್.ಪಿ.ಸಖಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.