ಸುಳ್ಯಕ್ಕೆ ಬಂದ ಡಾ.ರೇಣುಕಾಪ್ರಸಾದ್ ‌ಕೆ.ವಿ.ಯವರಿಗೆ ಸ್ವಾಗತ

0

ಹೈಕೋರ್ಟ್ ನ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ಅಮಾನತು ಗೊಂಡಿರುವ ಹಿನ್ನಲೆಯಲ್ಲಿ ಜಾಮೀನು ಪಡೆದಿರುವ ಡಾ.ಕೆ.ವಿ. ರೇಣುಕಾ ಪ್ರಸಾದ್ ರವರು ಇಂದು ಬಿಡುಗಡೆಗೊಂಡಿದ್ದು, ಇಂದು ಸಂಜೆ ಸುಳ್ಯಕ್ಕೆ ಬಂದಿದ್ದಾರೆ.

ಡಾ.ರೇಣುಕಾಪ್ರಸಾದ್ ರವರು ಕೆ.ವಿ.ಜಿ.‌ಜಂಕ್ಷನ್ ಗೆ ಬರುತಿದ್ದಂತೆ ಅವರ ವಿದ್ಯಾಸಂಸ್ಥೆ ಗಳ ವಿದ್ಯಾರ್ಥಿಗಳು ಸೇರಿದಂತೆ ಡಾ.ಉಜ್ವಲ್ ಯು.ಜೆ,, ಎನ್.ಎ.ರಾಮಚಂದ್ರ, ಸಂತೋಷ್‌ ಕುತ್ತಮೊಟ್ಟೆ, ದೊಡ್ಡಣ್ಣ ಬರೆಮೇಲು, ಪಿ.ಎ.ಮಹಮ್ಮದ್, ಸುರೇಶ್ ಎಂ.ಹೆಚ್, , ಪಿ.ಎಸ್.ಗಂಗಾಧರ್, ಎಂಪಿ.ಶಿವರಾಮ, ಜಾಕೆ ಮಾಧವ ಗೌಡ, ಸಂತೋಷ್ ಜಾಕೆ, ದಿನೇಶ್ ಮಡ್ತಿಲ, ರಿಯಾಜ್ ಕಟ್ಟೆಕಾರ್, ಶಾಫಿ ಕುತ್ತಮೊಟ್ಟೆ ಸಹಿತ ಹಲವರು ಸೇರಿ ಸ್ವಾಗತಿಸಿದರು.

ಬಳಿಕ ಕೆ.ವಿ.ಜಿ. ಯವರ ಪುತ್ಥಳಿಗೆ ಹಾರಾರ್ಪಣೆ ಗೈದ ಡಾ.ರೇಣುಕಾಪ್ರಸಾದ್ ರವರು ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.