ಸುಳ್ಯ ಸ್ನೇಹ ವಿದ್ಯಾಸಂಸ್ಥೆಯಲ್ಲಿ ಯುವ ದಿನಾಚರಣೆ

0

ಅಪ್ರತಿಮ ಜ್ಞಾನಿ ಸ್ವಾಮಿ ವಿವೇಕಾನಂದರು : ಡಾ.ದಾಮ್ಲೆ

“ಸ್ವಾಮಿ ವಿವೇಕಾನಂದರಿಗೆ ಅಪ್ರತಿಮ ಜ್ಞಾನವಿತ್ತು. ಅವರನ್ನು ಪರೀಕ್ಷಿಸಲು ಹೋದವರೆಲ್ಲ ಸೋಲುತ್ತಿದ್ದರು. ಅವರು ವಾಸ್ತವಿಕ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಹೇಳುವಲ್ಲಿ ಯಾವುದೇ ದಾಕ್ಷಿಣ್ಯವನ್ನು ತೋರುತ್ತಿರಲಿಲ್ಲ. ದೇಶದ ಜನರ ಅಜ್ಞಾನ, ಬಡತನ, ಅನಕ್ಷರತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸದ ಹೊರತು ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಪ್ರತಿಪಾದಿಸಿದ್ದರು. ಅವರ ಮಾದರಿ ವ್ಯಕ್ತಿತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಇವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜ.12ರಂದು ನಡೆದ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಸಂಸ್ಮರಣ ಭಾಷಣ ಮಾಡಿದರು.

ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮಲೆಯವರು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಸವಿತಾ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ದೇವಿಪ್ರಸಾದ್ ವಂಡಿಸಿದರು.