ನಾಗಪಟ್ಟಣ ಸದಾಶಿವ ದೇವಸ್ಥಾನದ ನೂತನ ಯಾಗ ಶಾಲೆಯ ಲೋಕಾರ್ಪಣೆ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯಾಗ ಶಾಲೆಯ ಲೋಕಾರ್ಪಣೆ ಕಾರ್ಯಕ್ರಮವು ಜ.14 ರಂದು ನಡೆಯಿತು.

ಪ್ರಾತ:ಕಾಲ ಅರ್ಚಕ ಶಿವಪ್ರಸಾದ್ ಕೆದಿಲಾಯರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಧಾರ್ಮಿಕ ಕಾರ್ಯಕ್ರಮವು ನೆರವೇರಿತು.


ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ‌ಕೋಲ್ಚಾರು, ಸದಸ್ಯರಾದ ಸುಧಾಮ ಆಲೆಟ್ಟಿ, ಬಾಬು ಗೌಡ ನಾಗಪಟ್ಟಣ, ರಾಧಾಕೃಷ್ಣ ಕೋಲ್ಚಾರು,
ಹೇಮನಾಥ ಕುರುಂಜಿ, ತಂಗವೇಲುಕುದ್ಕುಳಿ, ಶ್ರೀಮತಿ ಕಲ್ಯಾಣಿ ಮಂಜಪ್ಪ,ಶ್ರೀಮತಿ ವಿಜಯಕುಮಾರಿ ಹಾಗೂ ಸ್ಥಳೀಯ ರಾದ ಆನಂದ ಗೌಡ ಪರಿವಾರ, ಉಮೇಶ್ ಬೂಡು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.