ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ

0

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಪೂಜೆ -ಭಜನಾ ಕಾರ್ಯಕ್ರಮ , ಕರಸೇವಕರಿಗೆ ಸನ್ಮಾನ

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ
ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ , ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಗ್ಗೆಯಿಂದ ಭಜನಾ ಕಾರ್ಯಕ್ರಮ ನಡೆಸಲಾಗಿದ್ದು ಇದೇ ಸಂದರ್ಭ ಕರಸೇವಕರಾಗಿ ದುಡಿದಿದ್ದ ವೇಣು ಶಾಸ್ತ್ರಿ ಹಾಗೂ ವನಜಾ ಭಟ್ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್, ಪ್ರಸನ್ನ ದರ್ಬೆ, ಮನೋಹರ ರೈ, ಲೊಕೇಶ್ ಮುಂಡೊಕಜೆ, ಶೋಬಾ ಗರಿಧರ್, ಸ್ಥಳೀಯರಾದ ವೆಂಕಟ್ರಾಜು ಮತ್ತಿತರರು ಉಪಸ್ಥಿತರಿದ್ದರು.