ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರಾಣಪ್ರತಿಷ್ಠೆ ಹಿನ್ನೆಲೆ

0

ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ರಾಮತಾರಕ ಜಪ ಮಹಾಪೂಜೆ

ಎಂಟು ಮಂದಿ ಕರಸೇವಕರುಗಳಿಗೆ ಗೌರವಾರ್ಪಣೆ

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಜ.22ರಂದು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಶ್ರೀರಾಮ ತಾರಕ ಜಪ, ಶ್ರೀ ಆತ್ಮಾರಾಮ ದೇವರಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಬೆಳಿಗ್ಗೆ ರಾಮ ತಾರಕ ಜಪ ನಡೆದು, ಮಧ್ಯಾಹ್ನ ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ 1990 ಹಾಗೂ 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರಾಗಿ ದುಡಿದ ಗ್ರಾಮದ ವಸಂತ ಗಬ್ಬಲಡ್ಕ, ವಸಂತ ಮಳಿ, ಜಗನ್ನಾಥ ಕಾಪಿಲ, ಹೊನ್ನಪ್ಪ ಗೌಡ ಕೊಡೆಂಕಿರಿ, ಷಣ್ಮುಖ ಕುತ್ಯಾಳ, ಗೋಪಾಲಕೃಷ್ಣ ಕುತ್ಯಾಳ, ದಿ. ದಾಮೋದರ ಗೌಡ ಕುದ್ಕುಳಿ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ಯಶೋದ ಕುದ್ಕುಳಿ, ಹಾಗೂ ದಿ. ಕುಂಞಪ್ಪ ಮಡಿವಾಳ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ಲೀಲಾವತಿ ಉಗ್ಗಮೂಲೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊರ್ಬಂಡ್ಕ ಸೇರಿದಂತೆ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.