ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ: ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ಎದುರು ಸಂಭ್ರಮಾಚರಣೆ

0

ಆಯೋಧ್ಯೆಯಲ್ಲಿ ಇಂದು ನಡೆದ ಶ್ರೀ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮದ ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ಎದುರು ಸಂಭ್ರಮಾಚರಣೆ ಮಾಡಲಾಯಿತು. ಹಾಗೂ ಸಿಹಿತಿಂಡಿ ವಿತರಣೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟನೆ ನಡೆಯಿತು. ಬಳಿಕ ಕರಸೇವಕರಾದ ದಾಮೋದರ ಮಂಚಿ ಮತ್ತು ಶ್ರೇಯಸ್ ಕಾಂಪ್ಲೆಕ್ಸ್ ನ ಮ್ಹಾಲಕ ತಾಯಿ ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್ ವಿನೋಬ ನಗರರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸೃಷ್ಟಿ ಮೊಬೈಲ್ ಅಂಗಡಿ ಮ್ಹಾಲಕ ಶೈಲೇಂದ್ರ ಸರಳಾಯ, ಕ್ಯಾಟ್ ವಾಕ್ ಮ್ಹಾಲಕ ಅಶೋಕ್, ಬಿಗ್ ಬೈಟ್ ನ ಮ್ಹಾಲಕ ಸೃಜನ್ , ದ್ವಾರಕ ಹೋಟೆಲ್ ಮ್ಹಾಲಕ ವಸಂತ ರಾವ್, ಶ್ರೇಯಸ್ ಕಾಂಪ್ಲೆಕ್ಸ್ ಮಾಲಕ ಸುಧಾಕರ್ ಕಾಮತ್ , ಹೂವಿನ ಅಂಗಡಿ‌ ಮಾಲಕ ಮಾಧವ ಉಪಸ್ಥಿತರಿದ್ದರು.