ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಹಿನ್ನೆಲೆ

0

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಕಾರ್ಯಕ್ರಮವು ಜ‌.22ರಂದು ಮಧ್ಯಾಹ್ನ ನಡೆದ ಸಂದರ್ಭದಲ್ಲಿ ಸುಳ್ಯಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆಯು ಮತ್ತು ಭಜನಾ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ತೊಡಿಕಾನ ದೇವಾಲಯದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳಾದ ಕಿಶೋರ್ ಯು. ಎಂ ,ಯು .ಕೆ ಕೇಶವ, ಅರತೋಡು ತೊಡಿಕಾನ ಪ್ರಾ.ಕೃ.ಪ.ಸ.ಸ. ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಎನ್. ಎಂ ಪಿ .ಯು ಮಾಜಿ ಪ್ರಾಂಶುಪಾಲ ಕೆ .ಆರ್ ಗಂಗಾಧರ್ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರುಗಳಾದ ಎಸ್. ಪಿ ಲೋಕನಾಥ್, ಉಮಾಶಂಕರ್ ಅಡ್ಯಡ್ಕ, ಭವಾನಿ ಶಂಕರ್ ಅಡ್ತಲೆ ,ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಲೋಕೇಶ್ ಕಾನಡ್ಕ ಮತ್ತು ಸುಧಾಕರ ಎ.ಜಿ ಇವರನ್ನು ಸನ್ಮಾನಿಸಲಾಯಿತು .ದೇವಾಲಯದ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದ ಕಾರ್ಯಕ್ರಮ ನೆರವೇರಿಸಿಕೊಟ್ಟರು.