ಬಿ.ಯಂ.ಸ್ ಘಟಕ ಸುಬ್ರಹ್ಮಣ್ಯ ವತಿಯಿಂದ ಶ್ರೀ ರಾಮ ಪ್ರಾಣಾಪ್ರತಿಷ್ಠೆ ಹಿನ್ನೆಲೆಯಲ್ಲಿ ದೀಪ ಬೆಳಗಿ ಪುಷ್ಪಾರ್ಚನೆ

0

ಬಿ.ಯಂ.ಸ್ ಸುಬ್ರಹ್ಮಣ್ಯ ಘಟಕ ಇದರ ವತಿಯಿಂದ ಶ್ರೀ ರಾಮ ಪ್ರಾಣಾಪ್ರತಿಷ್ಠೆ ದಿನದ ಅಂಗವಾಗಿ ವಿಶೇಷವಾಗಿ ಆಟೋ ನಿಲ್ದಾಣವನ್ನು ಅಲಂಕಾರ ಮಾಡಿ ಶ್ರೀ ರಾಮ ಹಾಗೂ ಭಾರತಮಾತೆಯ ಪ್ರತಿಮೆ ಮಾಡಿ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಲಾಯಿತು.

ಸೇರಿದ ಎಲ್ಲರಿಗೂ ಮಜ್ಜಿಗೆ,ಲಾಡು ಹಂಚಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ದಿನೇಶ್ ಶಿರಾಡಿ,ಗೌರವಾಧ್ಯಕ್ಷರಾದ ಗಿರಿಧರ ಹೊಸೊಳಿಕೆ ಹಾಗೂ ಸಂಫದ ಸದಸ್ಯರು ಕಾರ್ಯದಲ್ಲಿ ಭಾಗವಹಿಸಿದರು. ಸಮಾಜಸೇವಕರಾದ ರವಿ ಕಕ್ಕೇಪದವು ಸಿಹಿ ತಿಂಡಿ ನೀಡಿ ಶುಭ ಹಾರೆಯಿಸಿದರು . ಟ್ಯಾಕ್ಸಿ ಚಾಲಕ ಮಾಲಕರು, ಸಾರ್ವಜನಿಕರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.