ಸುಳ್ಯ ನಾವೂರು ಮಹಮ್ಮಾಯಿ ದೇವಸ್ಥಾನದಲ್ಲಿ ಅಯೋಧ್ಯ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಭಜನಾ ಕಾರ್ಯಕ್ರಮ

0

ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಸುಳ್ಯದ ಗಾಂಧಿನಗರದ ಮಹಮ್ಮಾಯಿ ದೈವಸ್ಥಾನದಲ್ಲಿ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ ಮತ್ತು ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮ ಜರಗಿತು.

ಶ್ರೀ ಮಹಾಮಾಯಿ ಭಜನಾ ಮಂಡಳಿ, ಮಿತ್ರ ಬಳಗ ಕಾಯರ್ ತೋಡಿ, ಜಯನಗರ, ಶಾಂತಿನಗರದ ಭಜನಾ ತಂಡಗಳು ಒಟ್ಟಿಗೆ ಸೇರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖರಾಗಿರುವ ನ ಸೀತಾರಾಮ್ ಅಯೋಧ್ಯೆಯಲ್ಲಿ ಕರಸೇವೆಗೆ ತೆರಳಿದ ನೆನಪುಗಳನ್ನು ಮೆಲುಕು ಹಾಕಿದರು.

ಆಗಮಿಸಿದ ಸರ್ವರಿಗೂ ಸಿಹಿ ಮತ್ತು ಪಂಚಕಜ್ಜಾಯವನ್ನು ನೀಡಿ ಭಜನೆಯಲ್ಲಿ ಭಾಗವಹಿಸಿದ ಮಾತೆಯರಿಗೆ ವಿಶೇಷವಾಗಿ ಶ್ರೀ ರಾಮ ಪ್ರಾಣ ಪ್ರತಿಷ್ಠ ದಿನದ ಸವಿ ನೆನಪಿಗಾಗಿ ಸೀರೆಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಸೇವಾ ಭಾರತಿ ಹೆಲ್ಪ್ಲೈನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಮನೋಜ್ ಕುಮಾರ್ ಎಡಿ, ಟ್ರಸ್ಟಿಗಳಾದ ಕೇಶವ ನಾಯಕ್, ಹಿಂದೂ ಎಕನಾಮಿಕ್ ಫಾರಂನ ಸದಸ್ಯರು, ನಗರದ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.