ಮರ್ಕಂಜದಲ್ಲಿ ಜ.25 ರಿಂದ 7 ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ

0

ಯುವಕ ಮಂಡಲ ಮರ್ಕಂಜ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಮರ್ಕಂಜ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮರ್ಕಂಜ ಸಹಕಾರದಲ್ಲಿ ಜ.25 ರಿಂದ ಜ.31ರವರೆಗೆ ಏಳು ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ನಡೆಯಲಿದೆ.

ಶಿವಮೊಗ್ಗದ ಚಂದನ್ ಜಿ. ಮತ್ತು ಮಂಜುನಾಥ್ ಎನ್.ರವರು ಚಿಕಿತ್ಸೆ ನೀಡಲಿದ್ದಾರೆ.

ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.