ಇಂದು ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

0

ಅಮರಪಡ್ನೂರು ಗ್ರಾಮದ ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಜ. 24ರಂದು ನಡೆಯಲಿದೆ.
ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಸಕಲಪರಿವಾರ ದೇವರುಗಳ ವಾರ್ಷಿಕ ಪ್ರತಿಷ್ಠಾ ದಿನದ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ದೀಪಾರಾಧನೆ, ತಾಯಂಬಕಂ, ಮಹಾಪೂಜೆ ಬಳಿಕ ದೈವಗಳ ಭಂಡಾರ ತೆಗೆಯುವುದು ನಡೆಯಲಿದೆ. ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತಕಟ್ಟೆ ಪೂಜೆ, ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 11.00 ಗಂಟೆಯಿಂದ ಕ್ಷೇತ್ರದ ಧರ್ಮದೈವ ಶ್ರೀ ರಕ್ತೇಶ್ವರಿ ಮತ್ತು ಸಹಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.