ಪೈಚಾರ್ ಮಸೀದಿಯ ವಿಸ್ತೃತ ಅಂತಸ್ತು ಉದ್ಘಾಟನೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ

0

ಸುಳ್ಯ ಪುತ್ತೂರು ಮುಖ್ಯ ರಸ್ತೆ ಪೈಚಾರ್ ನಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಇದರ ವಿಸ್ತೃತ ನೂತನ ಮೆಲಂತ್ತಸ್ತು ಕಟ್ಟಡ ಉದ್ಘಾಟನೆ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಜ.22 ಮತ್ತು23 ರಂದು ನಡೆಯಿತು.

ಮಸೀದಿಯ ಮೆಲಂತ್ತಸ್ತು ಕಟ್ಟಡವನ್ನು ಕರ್ನಾಟಕ ರಾಜ್ಯ ಜಂಯ್ಯತ್ತುಲ್ ಉಲಮಾದ ಅಧ್ಯಕ್ಷ ಅಬ್ದುಲ್‌ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಉದ್ಘಾಟಿಸಿದರು.
ಸಯ್ಯದ್ ತ್ವಾಹೀರ್ ತಂಙಳ್ ಸಹದಿ ದುವಾಶಿರ್ವಚನ ಮಾಡಿದರು.
ಮತ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಂಞಿ ಕೋಯ ತಂಙಳ್ ಸಹದಿ ದುವಾಶಿರ್ವಚನ ಮೂಲಕ ಉದ್ಘಾಟಿಸಿದರು.
ಅಬ್ದುಲ್‌ ಗಪೂರ್ ಮೌಲವಿ ಕಿಚೇರಿ ಧಾರ್ಮಿಕ ಮತ ಪ್ರಭಾಷಣ ಮಾಡಿದರು.

ಜ.22 ರಂದು ಧಾರ್ಮಿಕ ಮತಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ನೆರವೇರಿಸಲಿದ್ದಾರೆ.
ಪ್ರಖ್ಯಾತ ಧಾರ್ಮಿಕ ಪಂಡಿತ ಪೆರೋಡ್ ಅಬ್ದುಲ್‌ ರಹಮಾನ್‌ ಸಖಾಫಿ ಪ್ರಭಾಷಣ ಮಾಡಿದರು.