ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

0

ಅಡ್ಕಾರು ಇಲೆಕ್ಟ್ರಾನಿಕ್ಸ್ ಮಾಲಕ ದಿನೇಶ್ ಅಡ್ಕಾರು ದಂಪತಿಯಿಂದ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಜಾಲ್ಸೂರು ಗ್ರಾಮದ ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ 75ನೇ ಗಣರಾಜ್ಯೋತ್ಸವವನ್ನು ಜ.26ರಂದು ಆಚರಿಸಲಾಯಿತು.

ಅಂಗನವಾಡಿ ಕೇಂದ್ರಕ್ಕೆ ಉದ್ಯಮಿ ಸುಳ್ಯದ ಅಡ್ಕಾರು ಇಲೆಕ್ಟ್ರಾನಿಕ್ಸ್ ಮಾಲಕರಾದ ದಿನೇಶ್ ಅಡ್ಕಾರು ಹಾಗೂ ಶ್ರೀಮತಿ ಚೈತ್ರ ದಿನೇಶ್ ದಂಪತಿಗಳು ಸುಮಾರು 60 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ಇದೇ ವೇಳೆ ತಿರುಮಲೇಶ್ವರ ಕುತ್ಯಾಳ ಅವರು ಅಂಗನವಾಡಿ ಕೇಂದ್ರಕ್ಕೆ ಮೈಕ್ ಸೆಟ್ ಕೊಡುಗೆಯಾಗಿ ನೀಡಿದರು.
ಉದ್ಯಮಿ ದಿನೇಶ್ ಅಡ್ಕಾರು ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತ, ಮಕ್ಕಳ ಪೋಷಕರು, ಸೇರಿದಂತೆ ಪುಟಾಣಿ ಮಕ್ಕಳು ಹಾಗೂ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.