ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

0

ಸೈನಿಕ ಸುಮಂತ್ ದೊಡ್ಡಮನೆ ರವರಿಂದ ಧ್ವಜಾರೋಹಣ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75ನೇ ಗಣರಾಜ್ಯೋತ್ಸವವನ್ನು ಜ.26ರಂದು ಆಚರಿಸಲಾಯಿತು.

ಭಾರತೀಯ ಸೇನೆಯ ಯೋಧ, ಸಂಘದ ಸದಸ್ಯ ಸುಮಂತ್ ದೊಡ್ಡಮನೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಗಣೇಶ್ ಪೈ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಅತಿಥಿಯಾಗಿ ಸಂಘದ ನಿರ್ದೇಶಕ ಚಿನ್ನಪ್ಪ ಚೊಟ್ಟೆಮಜಲು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಉಪಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎಣ್ಣೆಮಜಲು ಧ್ವಜಾರೋಹಣ ನಿರ್ವಹಣೆ ಮಾಡಿದರು. ಸಿಬ್ಬಂದಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಸಿಬ್ಬಂದಿ ಪೂವಪ್ಪ ಚಿದ್ಗಲ್ಲು ವಂದಿಸಿದರು. ನಿರ್ದೇಶಕರು, ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು.