ಗೂನಡ್ಕ : ವಾರ್ಷಿಕ ಮಹ್ಳರತುಲ್ ಬದ್ರಿಯಾ,ಜಲಾಲಿಯ್ಯಾ ಮಜ್ಲಿಸ್ ಹಾಗೂ ಬುರ್ಧಾ,ಕವ್ವಾಲಿ ಆಲಾಪನೆ

0

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ,ಸುನ್ನೀ ಯುವಜನ ಸಂಘ ಎಸ್ ವೈ ಎಸ್,ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್ ಎಸ್ ಎಫ್ ಗೂನಡ್ಕ ಯುನಿಟ್ ಇದರ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಮಹ್ಳರತುಲ್ ಬದ್ರಿಯಾ,ಜಲಾಲಿಯ್ಯಾ ಮಜ್ಲಿಸ್ ಹಾಗೂ ಬುರ್ಧಾ,ಕವ್ವಾಲಿ ಆಲಾಪನೆ ಕಾರ್ಯಕ್ರಮವು ಗೂನಡ್ಕದ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಕೆ ಎಂ ಜೆ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ಅಧ್ಯಕ್ಷತೆ ವಹಿಸಿ,ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿದರು.ಜಅಫರ್ ಸಅದಿ ಪಳ್ಳತ್ತೂರು ನೇತೃತ್ವದಲ್ಲಿ ರವೂಫ್ ಝುಹ್ರಿ,ಮಾಸ್ಟರ್ ಸಾಬಿತ್ ಕಾಸರಗೋಡು,ಮಾಸ್ಟರ್ ಶಿಬಿಲಿ ಉಪ್ಪಳ,ಶಾಕಿರ್ ಅಡಿಮಾರಡ್ಕ ಆಲಾಪನೆ ನಡೆಸಿದರು.ಬದ್ರಿಯಾ ಜುಮಾ ಮಸೀದಿ ಗೂನಡ್ಕ ಅಧ್ಯಕ್ಷ ಡಿ ಆರ್ ಅಬ್ದುಲ್ ಖಾದರ್ ,ಮುಅಲ್ಲಿಂ ಹಬೀಬ್ ಹಿಮಮಿ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ರಿ ಗೂನಡ್ಕ ಅಧ್ಯಕ್ಷ ಸಾದಿಕ್ ಕುಂಭಕ್ಕೋಡು,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ,ಸವಾದ್ ಗೂನಡ್ಕ,ಎಸ್ ಎಸ್ ಎಫ್ ಅಧ್ಯಕ್ಷ ಅಬ್ದುಲ್ ಅಝೀಝ್,ಹಾಜಿ ಉಮ್ಮರ್ ಪಿ ಎ ಗೂನಡ್ಕ,ಪಿ ಎ ಉಮ್ಮರ್ ಪುತ್ರಿ,ಅಬ್ದುಲ್ಲ ಮುಸ್ಲಿಯಾರ್ ,ಅಬ್ದುಲ್ ಅಝೀಝ್ ಟಿ ಬಿ,ಅಬೂಬಕ್ಕರ್ ಸಿದ್ಧೀಕ್ ಕಟ್ಟೆಕ್ಕಾರ್ಸ್,ಅಬ್ದುರ್ರಹ್ಮಾನ್ ಮೊಗರ್ಪಣೆ,ಫೈಝಲ್ ಝುಹ್ರಿ ಕಲ್ಲುಗುಂಡಿ,ಶಮೀರ್ ಮೊಗರ್ಪಣೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರು.

ಎಸ್ ವೈ ಎಸ್ ಅಧ್ಯಕ್ಷ ಹನೀಫ್ ಝೈನಿ ಸ್ವಾಗತಿಸಿ,ದಅವಾ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿದರು.