ಕುಮಾರಪರ್ವತ ಚಾರಣಕ್ಕೆ ಸರ್ಕಾರ ನಿರ್ಬಂಧ

0

ರಾಜ್ಯದ ಕಠಿಣ ಚಾರಣ ತಾಣ ಪುಷ್ಪಗಿರಿ ವಲಯದ ಕುಮಾರ ಪರ್ವತಕ್ಕೆ ಕಳೆದ ವಾರಾಂತ್ಯ ಪ್ರವಾಸಿಗರ ದಟ್ಟಣೆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಚಾರಣಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಚಾರಣಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಫೆ. 1ರಿಂದ ಪ್ರವೇಶಾವಕಾಶ ಬಂದ್ ಮಾಡಿ ಮುಂದಿನ ಅಕ್ಟೋಬರ್ ನಿಂದ ಆನ್ ಲೈನ್ ಬುಕಿಂಗ್ ಆರಂಭಿಸಲು ಅರಣ್ಯ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ. ಪ್ರತಿನಿತ್ಯ ಸುಬ್ರಹ್ಮಣ್ಯ ಮತ್ತು ಪುಷ್ಪಗಿರಿ ವನ್ಯಜೀವಿ ವಲಯದ ಕಡೆಯಿಂದ ತೆರಳಲು ತಲಾ 300 ಮಂದಿ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ನಿರ್ಧಾರಕ್ಕೆ ಕಾರಣ ಏನು? : ಜ.26 ರಿಂದ ಸರಣಿ ರಾಜ್ಯ ಇದ್ದುದರಿಂದ ಕುಕ್ಕೆ ಸುಬ್ರಹ್ಮಣ್ಯ ವನ್ಯಜೀವಿ ಗೇಟ್ ನಲ್ಲಿ ಸುಮಾರು 1200ಕ್ಕೂ ಅಧಿಕ ಚಾರಣಿಗರು ಟ್ರಕ್ಕಿಂಗ್ ಗೆ ಬಂದಿದ್ದರು. ಹೀಗಾಗಿ ಕೆಲಕಾಲ ನೂಕುನುಗ್ಗಲು ಆದ ಹಿನ್ನೆಲೆಯಲ್ಲಿ ಚಾರಣಿಗರು ಸೆರೆಹಿಡಿದ ವಿಡಿಯೋ ತುಣುಕು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಗಮನಿಸಿದ ಅರಣ್ಯ ಸಚಿವರು ಮತ್ತು ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.