ಪೋಲಿಸ್ ಕ್ವಾಟ್ರಸ್ ನಲ್ಲಿರುವಮಹಿಳೆಯರಿಂದ ಕಲ್ಕುಡ ದೈವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

0

ಸುಳ್ಯ ಗಾಂಧಿನಗರದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ದೈವಗಳ ನೇಮೋತ್ಸವದ ಪೂರ್ವ ಭಾವಿಯಾಗಿ ಸುಳ್ಯ ಪೋಲಿಸ್ ಇಲಾಖೆಯ ಕ್ವಾಟ್ರಸ್ ನಲ್ಲಿರುವ ಮಹಿಳೆಯರು ದೈವಸ್ಥಾನದ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಮ್ಮಿಕೊಂಡರು.

ಪೋಲಿಸ್ ಕ್ವಾಟ್ರಸ್ ನಲ್ಲಿರುವ ಎಲ್ಲಾ ಮಹಿಳೆಯರು ಬಂದು ದೈವಸ್ಥಾನದ ವಠಾರವನ್ನು ನೀರು ಹಾಕಿ ಗುಡಿಸಿ ಸ್ವಚ್ಚತಾ ಸೇವಾ ಕಾರ್ಯವನ್ನು ಕೈಗೊಂಡರು.
ಪ್ರತಿ ವರ್ಷ ನೇಮೋತ್ಸವದ ಮುಂಚಿತವಾಗಿ ಇಲ್ಲಿನ ಮಹಿಳೆಯರು ಸ್ವಚ್ಚತಾ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ರೂಢಿಯಾಗಿದೆ.