ಕುಡೆಕಲ್ಲು ದಿ. ವಿಶ್ವನಾಥ ಗೌಡ ರವರಿಗೆ ಮೈಂದೂರು ಮನೆಯಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ

0

ಪ್ರತಿಷ್ಠಿತ ಕುಡೆಕಲ್ಲು ಮನೆತನದ ತರವಾಡು ‌ದೈವಸ್ಥಾನದ ಆಡಳ್ತೆದಾರರಾಗಿದ್ದ ದಿ.ವಿಶ್ವನಾಥ ಗೌಡ ರವರು‌ ಜ.23 ರಂದು ನಿಧನರಾಗಿದ್ದು ಮೃತರ ‌ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಫೆ.2 ರಂದು ಮೃತರ ಸ್ವಗೃಹ ಆಲೆಟ್ಟಿಯ ಮೈಂದೂರಿನಲ್ಲಿ ನಡೆಯಿತು.

ಮೃತರ ಜೀವನಗಾಥೆಯ ಕುರಿತು ಕುಡೆಕಲ್ಲು ‌ಕುಟುಂಬದ ಹಿರಿಯರಾದ ವಾಸುದೇವ ಗೌಡ ‌ಕುಡೆಕಲ್ಲು ಹಾಗೂ ರತ್ನಾಕರ ಗೌಡ ಕುಡೆಕಲ್ಲು ರವರು ಗುಣಗಾನ ಮಾಡಿ ‌ನುಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ‌ಮೃತರ ಪತ್ನಿ ಶ್ರೀಮತಿ ವೇದಾವತಿ, ಪುತ್ರರಾದ ಬಿಪಿನ್ ಕುಡೆಕಲ್ಲು, ಕಿಶನ್ ಕುಡೆಕಲ್ಲು, ಸಹೋದರ ಸುಂದರ ಗೌಡ ಕುಡೆಕಲ್ಲು, ಸಹೋದರಿಯರಾದ ಶ್ರೀಮತಿ ‌ದಮಯಂತಿ, ಶ್ರೀಮತಿ ರೇವತಿ, ಸೊಸೆಯಂದಿರಾದ ಶ್ರೀಮತಿ ಚೈತ್ರಾ, ಶ್ರೀಮತಿ ಸಹನಾ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,
ಬಂಧುಗಳು ಉಪಸ್ಥಿತರಿದ್ದರು.


ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.