ಆಲೆಟ್ಟಿ ಸದಾಶಿವ ದೇವರ ದರ್ಶನ ಬಲಿ ಉತ್ಸವ – ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ

0

ಆಲೆಟ್ಟಿ ಶ್ರೀ ಸದಾಶಿವ ದೇವರ ಜಾತ್ರೋತ್ಸವದ ಇಂದು ಶ್ರೀ ದೇವರ ದೊಡ್ಡ ದರ್ಶನ ಬಲಿ ಉತ್ಸವ ಜರುಗಿತು. ಬಳಿಕ ಬಟ್ಟಲು ಕಾಣಿಕೆಯಾಗಿ ರಾಜಾಂಗಣ ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದರ್ಶನ ಬಲಿ ಉತ್ಸವ ಕಣ್ತುಂಬಿಕೊಂಡು ಪ್ರಸಾದ ಸ್ವೀಕರಿಸಿದರು.